ಸ್ಪಟಿಕ

ಸ್ಪಟಿಕ, ಒಂದು ಮಂಡಳಿಯಿಂದ ಪ್ರಾರಂಭಿಸಿದ ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿರುವ ವಿಶಿಷ್ಠ ಯೋಜನೆ. ಸ್ಪಟಿಕ, ಒಂದು ಪವಿತ್ರವಾದ ಮತ್ತು ಪಾರದರ್ಶಕತೆಗೆ ಹೆಸರಾದ ವಸ್ತುವಾಗಿರುವುದರಿಂದ, ಅದೇ ಮಾದರಿಯಲ್ಲಿ ಮಂಡಳಿಯ ಹಣಕಾಸಿನ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರಿಗೆ ಮತ್ತ ಸಂಬಂಧಿತರಿಗೆ ಪಾರದರ್ಶಕತೆಯನ್ನು ಕಲ್ಪಿಸುವ ಉದ್ದೇಶದಿಂದ ಹೆಸರಿಸಲಾಗಿದೆ.

ಸ್ಪಟಿಕ ತಂತ್ರಾಂಶವು, ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ ಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವ ಮತ್ತು ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಮಂಡಳಿಯ ಆಂತರಿಕ ವ್ಯವಸ್ಥೆಯೊಡನೆ ಸಿಂಕ್ರೊನೈಸೇಶನ್ ಗೊಳಿಸಿ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಸ್ಥಾಪಿಸಲಾಗಿದೆ. ವಿವಿಧ ಯೋಜನೆಗಳಿಗೆ ಅನುಗುಣವಾಗಿ ಅವಶ್ಯಕ ವರದಿಗಳನ್ನು ಪಡೆಯುವ ವ್ಯವಸ್ಥೆಯನ್ನು ಸ್ಪಟಿಕ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಸದರಿ ವರದಿಗಳನ್ನು ಮೊಬೈಲ್ ಆಪ್ ಮತ್ತು ವೆಬ್ ಸೈಟ್ ಮೂಲಕವೂ ಪಡೆಯಬಹುದಾಗಿದ್ದು ಸೋಶಿಯಲ್ ಮೀಡಿಯ ಮೂಲಕ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಬಹುದಾಗಿದೆ.